Current Date 23 Sep, 2026

ಲೂಸ್ ಮಾದ ಯೋಗಿ, ಪ್ರಜ್ವಲ್ ದೇವರಾಜ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್

ಸ್ಟಾರ್‌ ನಟರ ಹುಟ್ಟುಹಬ್ಬ ಅಂದ್ರೆ, ಅದು ಅಭಿಮಾನಿಗಳಿಗೆ ದೊಡ್ಡ ಹಬ್ಬ. ನೆಚ್ಚಿನ ನಟ ಕೂಡ ಆ ದಿನವನ್ನು ಅಷ್ಟು ಸಂಭ್ರಮಿಸುತ್ತಾನೋ ಇಲ್ವೋ ಅಭಿಮಾನಿಗಳಿಗೆ ಅದು ಸಿಕ್ಕಾಪಟ್ಟೆ ಸ್ಪೆಷಲ್. ಆ ದಿನ ಆರಾಧ್ಯ ದೈವವನ್ನು ನೋಡಿ ಕೈ ಕುಲುಕಿ ಹುಟ್ಟುಹಬ್ಬದ ಶುಭ ಕೋರಬೇಕು ಎಂದು ಬಯಸುತ್ತಾರೆ.

ದೊಡ್ಡ ಕಲಾವಿದರ ನಿವಾಸಗಳಲ್ಲಿ ಅವರ ಹುಟ್ಟುಹಬ್ಬದ ದಿನ ಅಭಿಮಾನಿಗಳ ಸಂಭ್ರಮವೇ ಜೋರಾಗಿರುತ್ತದೆ. ಆದರೆ ಅದ್ಯಾಕೊ ಇತ್ತೀಚಿನ ವರ್ಷಗಳಲ್ಲಿ ನಟರು ತಮ್ಮ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಅದಕ್ಕೆ ಏನೇನೋ ಕಾರಣ ಕೊಡುತ್ತಾರೆ. ಕೊವಿಡ್ ಸಂಕಷ್ಟದ ಸಮಯದಲ್ಲಿ ಹಲವು ನಟ-ನಟಿಯರು ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಣೆ ಬ್ರೇಕ್ ಹಾಕಿದ್ದರು.